Friday, June 22, 2007



ಅನ್ನ ಪರಬ್ರಹ್ಮ.....

ಇವೊತ್ತು ಬಹಳ ದಿನಗಳ ನಂತರ ನಮ್ಮ ಕ್ಯಾಂಟೀನ್ ಅಲ್ಲಿ ಊಟ ಮಾಡೋಕ್ಕೆ ಹೋಗಿದೆ (ವರುಣನ ಕೃಪೆಯಿಂದ). ನಮ್ಮ ಅಲ್ಲಿ ಊಟ ಸರಿ ಇರಲಿಲ್ಲ ಅವನಿಗೆ ಹಿಡಿ ಶಾಪ ಹಾಕ್ತಾ ಅರ್ಧ ಊಟ ಮಾಡ್ಬಿಟ್ಟು ಇನ್ನರ್ಧನ ಹಂಗೆ ಎಸೆದ್ಬಿಟ್ಟು ಬಂದೆ.ಬಂದು ಹಂಗೇ ಕೂತು ಮೇಲ್ ನೋಡ್ತಾ ಇದ್ದಾಗ, ಈ ಚಿತ್ರ ಕಾಣಿಸ್ತು. ಒಂದೇ ಸಾರಿ ಯೇನೋ ಒಂಥರಾ ಪಾಪ ಭಾವನೆ ಬರೊಕ್ಕೆ ಶುರು ಆಯ್ತು.ಇದು ನಿಜವಾಗ್ಲೂ ವಿಚಾರ ಮಾಡೊಂತ ವಿಷಯ ಅಲ್ವಾ?? ನಾವು ದಿನಾ ಯೆಷ್ಟು ತಿನ್ನೋ ಪದಾರ್ಥಗಳನ್ನ ಎಸೀತೀವಿ, ಯಾವತ್ತಾದ್ರೂ ಇಂಥವರ ಬಗ್ಗೆ ಆಲೋಚನೆ ಮಾಡಿದೀವಾ?? ಇವ್ರು ನಮ್ಮ ಸುತ್ತ ಮುತ್ತಾನೇ ಇರ್ತಾರೆ ಆದ್ರು ನಾವು ಗಮನಿಸೋಲ್ಲ ಲೊಕದ ಕಷ್ಟ ಎಲ್ಲಾ ನಮಗೆ ಯಾಕೆ?? ನಾವು ಎ.ಸಿ ರೂಮಲ್ಲಿ ಚೆನ್ನಾಗಿದ್ರೆ ಆಯ್ತು ಅಲ್ವಾ??
ನಮ್ಮಲ್ಲಿ "ಅನ್ನಂ ಪರಬ್ರಹ್ಮಂ" ಅಂತಾರೆ ಅದು ಇದ್ರೇನೆ ನಮ್ಮ ಜೀವನ ಅಲ್ವಾ?? ಯೆಲ್ಲಾರು ಮಾಡುವದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ. ನಾವು ಇದರ ಸಲುವಾಗಿ ಯೆಷ್ಟು ಕಷ್ಟ(?) ಪಡ್ತೇವಲ್ವಾ?? ಮತ್ತೆ ಸಿಕ್ಕಾಗ ಬಿಡೋದು ಯಾಕೆ??? ಇದು ಬಹಳ ಇರುವದು ಐಟಿ ಸಂಸ್ಥೆಗಳಲ್ಲಿ. ಊಟ ಚೆನ್ನಾಗಿ ಇರೋಲ್ಲ ಅದ್ಕೆ ಹಾಕ್ಕೊಂಡಿದ್ದೆಲ್ಲಾ ತೊಟ್ಟಿ ಪಾಲು. ಬಹಳ ಜವಾಬ್ದಾರಿತವಾಗಿ ಹೇಳೋದಾದ್ರೆ ನಾವು ಯೆಷ್ಟು ಬೇಕೋ ಅಷ್ಟೇ ಹಾಕ್ಕೊಂಡ್ರೆ ಒಳ್ಳೇದು. ಆದ್ರೆ ಯಾರು ಆ ಭೋಜನ ಮಂದಿರ ನಡೆಸ್ತಾ ಇದಾನೋ ಅವನ್ದು ಕೆಲವು ಜವಾಬ್ದಾರಿ ಇರುತ್ತೆ.ನಮಗೆ ಮೃಷ್ಟಾನ್ನ ಬೇಡಾ ಸ್ವಾಮಿ, ರುಚಿಯಾಗಿರೋ ಅನ್ನ ಸಾಂಬಾರು ಕೊಡಿ ಸಾಕು. ಅದಕ್ಕೆ ಅವನ ಉತ್ತರ ’ಸಾರ್ ಒಂದೇ ಸಾರಿ ೪೦೦೦ ಊಟ ಮಾಡ್ಬೇಕು ಅಂದಾಗ ರುಚಿ ಬರಲ್ಲಾ!!!’ ಮಾಡಕ್ಕಾಗಲ್ಲಾ ಅಂದ್ರೆ ಯೇನಕ್ಕೆ ತಗೋತೀಯಾ?? ಅನ್ನೋ ಪ್ರಶ್ನೆಗೆ ಅವನ ಹತ್ತಿರ ಉತ್ರ ಇಲ್ಲ। ಇದಕ್ಕೆ ನಮ್ಮ ಕಂಪನಿಗಳೂ ಯೇನು ಹೇಳಲ್ಲ.ನಾವಂತೂ ಬಿಡಿ ಸಭ್ಯಸ್ತರು ಅವನ್ನ ಕೇಳಿದ್ರೆ ನಮ್ಮ ಮರ್ಯಾದೆ ಪ್ರಶ್ನೆ ಯೇನು ಅಲ್ವಾ???
ಅವೆಲ್ಲ ಆಗೊ ಕೆಲ್ಸ ಅಲ್ಲ ಬಿಡಿ, ಅದಕ್ಕೆ ಪ್ರೊಡಕ್ಷನ್ ಕಂಪನಿಗಳೇ ಬೇಕು. ಕನಿಷ್ಠ ನಾವು ಮಾಡೊಕ್ಕೆ ಆಗೋದು ದಯವಿಟ್ಟು ನಿಮ್ಮ ತಟ್ಟೆಯಲ್ಲಿ ಹಾಕಿದ್ದನ್ನ ತಿನ್ನಿ, ಅದು ಚೆನ್ನಾಗಿ ಇರ್ಲಿ ಇಲ್ದೆ ಇರ್ಲಿ ದಯವಿಟ್ಟು ಎಸೀಬೇಡಿ. ನೀವು ದಾರಿಯಲ್ಲಿ ಹೋಗ್ತಾ ಇರೋವಾಗ ಯಾವ್ದಾದ್ರು ಚಿಕ್ಕ ಮಗು ಭಿಕ್ಷೆ ಹಾಕೋ ಬದ್ಲು ಸ್ವಲ್ಪ ಕಷ್ಟ ತಗೊಂಡು ಪಕ್ಕದಲ್ಲಿರೋ ಅಂಗಡಿ ಇಂದ ಯೇನಾರ ತಿನ್ನೋಕೆ ಕೊಡ್ಸಿ. ನೀವು ನೀಡಿದ ಹಣ ಆ ಮಗುಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲಾ... ಕೊನೆಯದಾಗಿ ನಿಮ್ಮ ಮನೆಯಲ್ಲಿ ಯಾವ್ದೇ ಕರ್ಯಕ್ರಮ ಇದ್ದು ಊಟ ಹೆಚ್ಚಾಗಿದ್ರೆ ದಯವಿಟ್ಟು 1098-child helpline ಗೆ ಕರೆ ಮಾಡಿ ಅದು ಯಾವ್ದೋ ಹಸಿದ ಮಗುವಿನ ಹೊಟ್ಟೆಯನ್ನ ತುಂಬ್ಸುತ್ತೆ.ನಮ್ಮ ಕಡೆಯಿಂದ ಇಷ್ಟನ್ನಾದ್ರೂ ಮಾಡ್ಬಹುದಲ್ಲಾ??

3 comments:

pramod said...

Hi Santosh,

Really a good article maga..... We all should make a point not to waste any food what we take.. I have made this practice for some years now...

Good article...

Keep Going
Pramod

ಶ್ರೀನಿಧಿ.ಡಿ.ಎಸ್ said...

ನಮಸ್ತೇ,
1098 ಗೆ ಫೋನ್ ಮಾಡಿದರೆ, ಅವರು ಬಂದು ಉಳಿದ ಆಹಾರ ತೆಗೆದುಕೊಂಡು ಹೋಗುತ್ತಾರೆಂಬುದು ಶುದ್ಧ ತಪ್ಪು ಮಾಹಿತಿ. ಆ ಸಂಸ್ಥೆಗೆ ಬೇಕಷ್ಟು ಹಣ ವಿವಿಧ ಮೂಲಗಳಿಂದ ಹರಿದು ಬರುತ್ತದೆ. ನಾನು ಆ ಸಂಸ್ಥೆಯಲ್ಲಿ ಒಂದು ವರುಷ trainee ಆಗಿ ಕೆಲ್ಸಾ ಮಾಡಿದ್ದೇನೆ.. ಮೈಲ್ ಗಳ ಸತ್ಯಾಸತ್ಯತೆಯನ್ನ ಮೊದಲು ಪರೀಕ್ಷಿಸಿಕೊಳ್ಳಿ.
ನಿಮ್ಮ ಬ್ಲಾಗ್ ಚೆನ್ನಾಗಿದೆ. ಬರೆಯುತ್ತಿರಿ.

bhumi said...

hae really heart touching ...........please i request all of you dont waste the food....

keep up waking up people from this kind of bad habits....


saru